-
-
ನನ್ನ ಹೈಸ್ಕೂಲು ದಿನಗಳು
Nanna Highschoolu Dinagalu
Author: Dr.B.R. Satyanarayana
Publisher: Self Published on Kinige
Pages: 62Language: Kannada
Description
ನನ್ನ ಹೈಸ್ಕೂಲು ದಿನಗಳು
ಕುಂದೂರುಮಠದ ಮೂಲ ಹುಡುಕುವ ವಿವರಗಳಂತೂ ಒಬ್ಬ ಸಂಶೋಧಕಗೆ ಮಾತ್ರ ಸಾಧ್ಯವಾಗುವಂಥದ್ದು. ಲೇಖಕರು ಸ್ವತಃ ಸಂಶೋಧಕರೂ ಆಗಿರುವುದರಿಂದ ಇದು ಸಾಧ್ಯವಾಗಿದೆ. ಪೂಜಿಸುವ ದೇವರ ಹೆಸರೇ ಬದಲಾದ ಕಥೆ, ಮೆಳೆಯಮ್ಮಗೆ ಮಾಂಸಪ್ರಸಾದವನ್ನು ಲಿಂಗಾಯಿತ ಸಮುದಾಯದ ಪೂಜಾರಿ ಅರ್ಪಿಸುತ್ತಿದ್ದ ಪರಿ (ಈ ವ್ಯಂಗ್ಯದ ಹಿಂದೆ ಸ್ವಲ್ಪ ಕ್ರೌರ್ಯ ಇದೆಯೇನೋ ಅಸುತ್ತೆ), ಹಳ್ಳಿ ಶಾಲೆಗಳ ಕಥೆ, ಹೆಡ್ಮಾಸ್ಟರಿಗೆ ರು ಕೊಟ್ಟಿದ್ದು, ಹಾಸ್ಟೆಲ್ಲಿನಲ್ಲಿ ಆದ ಕಳ್ಳತನ... ಇವೆಲ್ಲಾ ಓದಿದಾಗ ಸ್ವಾರಸ್ಯಕರ ಕಥೆಗಳ ವ್ಯಕ್ತಿ ಚಿತ್ರಣಗಳು ಒಂದು ಕಾದಂಬರಿಯ ಹರುಹನ್ನು ಪಡೆದ ಬರಹಗಳಾಗಿವೆ. ಅಯ್ಯಪ್ಪಸ್ವಾಮಿಯ ಯಾತ್ರೆಯ ಬಗೆಗಿನ ಬರಹವೂ ಅಷ್ಟೆ. ಒಂದು ಸಮುದಾಯದ ನಂಬಿಕೆ, ಆಚರಣೆ ಇವುಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಬರಹಗಳ ಬಂಧವೂ ಹಾಗೆ..... ಒಮ್ಮೆ ಘಟನೆಯನ್ನು, ಮಗದೊಮ್ಮೆ ವ್ಯಕ್ತಿ ಪರಿಚಯವನ್ನು, ಮತ್ತೊಮ್ಮೆ ಸ್ಥಿತಿಚಿತ್ರಣವನ್ನು ಕೊಡುತ್ತಾ ವೈವಿಧ್ಯ ಕಾಯ್ದುಕೊಂಡಿದೆ.
Preview download free pdf of this Kannada book is available at Nanna Highschoolu Dinagalu
Login to add a comment
Subscribe to latest comments
