• Avanavanu Kayva
  • Ebook Hide Help
    ₹ 30 for 30 days
    ₹ 108
    120
    10% discount
    • fb
    • Share on Google+
    • Pin it!
  • ಆವನಾವನು ಕಾಯ್ದ

    Avanavanu Kayva

    Author:

    Publisher: Indiresha Prakashna

    Pages: 101
    Language: Kannada
    Rating
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    Be the first to vote
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    '0/5' From 0 premium votes.
Description

ಕನ್ನಡ ಸಾಹಿತ್ಯಜಗತ್ತಿನ ಬಹುಮುಖ್ಯ ಆಕರ್ಷಣೆ ಕಥಾಸಾಹಿತ್ಯ. ಮನುಷ್ಯ ಸಂವೇದನೆ ಅದರಲ್ಲೂ ಮಹಿಳಾ ಸಂವೇದನೆಯನ್ನು ಒಳಗೊಂಡಿರುವ ಕಥೆಗಳು ದೀರ್ಘಕಾಲ ಜನರ ಮನಸ್ಸಿನಲ್ಲಿ ಉಳಿಯಬಲ್ಲವು. ಕನ್ನಡ ಕಥಾಸಾಹಿತ್ಯದ ಘನತೆಯನ್ನು ಹೆಚ್ಚಿಸಿರುವ ಆರಂಭದ ಕತೆಗಾರ್ತಿಯರು ತ್ರಿವೇಣಿ, ಕೊಡಗಿನ ಗೌರಮ್ಮ, ಎಚ್.ವಿ.ಸಾವಿತ್ರಮ್ಮ, ವಾಣಿ, ಡಾ.ಅನುಪಮಾ ನಿರಂಜನ, ಎಂ.ಕೆ. ಇಂದಿರಾ ಮುಂತಾದವರು. ನಂತರದ ಕಾಲಘಟ್ಟದಲ್ಲಿ ವೈದೇಹಿ, ಡಾ.ವೀಣಾ ಶಾಂತೇಶ್ವರ, ಗೀತಾ ನಾಗಭೂಷಣ, ಸಾರಾ ಅಬೂಬಕ್ಕರ, ನೇಮಿಚಂದ್ರ ತಮ್ಮ ಕತೆಗಳಲ್ಲಿ ಹೆಣ್ಣಿನ ಮನೋ ಲೋಕದ ವಿವಿಧ ಆಯಾಮಗಳನ್ನು ತೊಳಲಾಟಗಳನ್ನು ಅನಾವರಣ ಗೊಳಿಸುತ್ತಲೇ ಅವುಗಳನ್ನು ಮೀರುವ ಬಗೆಯನ್ನು ಕಾಣಿಸಿದರು. ಈ ಮುಂಚೆ ಸಾಹಿತ್ಯದಲ್ಲಿ ಹೆಣ್ಣಿನ ಸ್ವಮರುಕ ವ್ಯಕ್ತಿತ್ವವನ್ನು ಮಾತ್ರ ನೋಡುತ್ತಿದ್ದೆವು. ಕರುಳಬಳ್ಳಿಯ ಸಂಬಂಧವನ್ನು ಗಟ್ಟಿಗೊಳಿಸಿ ಕೊಳ್ಳುತ್ತಲೇ ತನ್ನ ಅಸ್ಮಿತೆಯನ್ನು ಸಾರುವ ಹೆಣ್ಣಿನ ವ್ಯಕ್ತಿತ್ವ ಬಹುಮುಖ್ಯವಾಗಿ ಸಾಹಿತ್ಯದಲ್ಲಿ ಪ್ರತಿಫಲಿತವಾಯಿತು.

ದಶಕಗಳಿಂದ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನೆಲೆಯಾಗಿದ್ದರೂ, ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಬದುಕು ಕಟ್ಟಿಕೊಂಡಿರುವ ಸರಿತಾ ನವಲಿಯವರ ಚೊಚ್ಚಲ ಕೃತಿ “ಆವನಾವನು ಕಾಯ್ದ, ಈ ಕಥಾಸಂಕಲನದಲ್ಲಿ ಹೈದ್ರಾಬಾದ್ಕರ್ನಾಟಕದ ಭಾಷಾ ಸೊಗಡು, ಮನುಷ್ಯ ಸಂಬಂಧಗಳ ಬೆಸುಗೆ, ನಿರಾಕರಣೆಯನ್ನು ಲೇಖಕಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. `ರೇಷ್ಮೆಸೀರೆ' ಕಾಲ ಕಳೆದಂತೆ ಮೆರುಗು, ನುಣುಪು, ಬಣ್ಣ ಮಾಸುವಂತೆ ಸಂಬಂಧಗಳೂ ಹೇಗೆ ಸವಕಲಾಗುತ್ತ ಸಾಗುತ್ತವೆಂಬುದನ್ನು ನಿರೂಪಿಸಿದರೆ, 'ಐದು ರೂಪಾಯಿಯ ಋಣ'ದಲ್ಲಿ ಶುಭಾಗೆ ತನಗೆ ಆಪತ್ಕಾಲದಲ್ಲಿ ನೆರವು ನೀಡಿದ ಬ್ಯಾಂಕ್ ಮ್ಯಾನೇಜರಗೆ ಐದುರೂಪಾಯಿ ಹಿಂದಿರುಗಿಸಲಾಗಲಿಲ್ಲ ಎಂಬ ನೋವು ಕಾಡುತ್ತಲೇ ಇದ್ದರೆ, ಒಂದೆ ತಾನಿನ ತಾನು'ನಲ್ಲಿ ಅಜ್ಜಿ, ಅಜ್ಜನ ಪ್ರೇಮವಲ್ಲರಿ ಅರಳಿ ಬೆಳೆದ ಬಗೆಯನ್ನು ಮೊಮ್ಮಗಳು ಬೆಕ್ಕಸ ಬೆರಗಾಗಿ ಕಾಣುವ ಸೊಗಸು ಮುದ ನೀಡುತ್ತದೆ. `ವರ್ಷ ರೂಪಿಣಿ'ಯಲ್ಲಿ ಗುಳೇ ಹೋಗುತ್ತಿರುವ ರೈತರ ಬದುಕುಬವಣೆಗಳನ್ನು ಅವಲೋಕಿಸುತ್ತ ಅಲ್ಲಿಯೇ ನೆಲೆಯೂರಿ ಮತ್ತೆ ಬದುಕು ರೂಪಿಸಿ ಕೊಳ್ಳುವ ಹೆಣ್ಣು ಮಗಳ ರೀತಿ ಮಾದರಿಯಾದುದು.

'ಆವನಾವನು ಕಾಯ್ದ'ದಲ್ಲಿ ಮನುಷ್ಯ ಸಂಬಂಧಗಳು ಸೂಕ್ಷ್ಮತೆಯನ್ನು ಕಳೆದು ಕೊಂಡು ಯಾಂತ್ರಿಕವಾಗುತ್ತಿರುವ ಮತ್ತು ಸ್ವಾರ್ಥಪರತೆಯೇ ಹೆಚ್ಚಾಗಿ ತಂದೆ, ತಾಯಿಯ ಮನಸ್ಥಿತಿಯನ್ನೂ ಅರ್ಥೈಸಿಕೊಳ್ಳಲಾರದೇ ಭಾವನಾತ್ಮಕ ಜಗತ್ತು ಮರೆಯಾಗುತ್ತಿರುವುದನ್ನು ಮಾರ್ಮಿಕವಾಗಿ ತಿಳಿಸಲಾಗಿದೆ. 'ಒಲುಮೆಯಿಂದ ಒಲುಮೆಗೆ' ವಸಂತ ಮತ್ತು ಚಾರುಲತಾರ ಪ್ರೀತಿ ಗುಪ್ತಗಾಮಿನಿಯಾಗಿ ಹರಿದ ಬಗೆಯನ್ನು ಚಿತ್ರಿಸಿದರೆ, ಅವರಿಬ್ಬರು' ಕಥೆ ಸಲಿಂಗಕಾಮವನ್ನು ಸಮಾಜ ನೋಡುವ ದೃಷ್ಟಿಕೋನ ಇನ್ನೂ ಬದಲಾಗದ್ದನ್ನು ತಿಳಿಸುತ್ತದೆ. 'ದಾರಿ ನೂರಿವೆ ನಡೆವಾತಗೆ' ಗ್ರಾಮೀಣ ಜನರ ಸಾಮಾಜಿಕ, ರಾಜಕೀಯ ಪರಿಸ್ಥಿತಿ ಬಿಂಬಿಸಿದರೆ, 'ಒಳಹರಿಗೆ'ಯಲ್ಲಿ ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಕೊಡುಗೆಯಾದ ಬಾಡಿಗೆ ತಾಯ್ತನದ ತಲ್ಲಣತುಮುಲಗಳು ಮನಮುಟ್ಟುವಂತೆ ಭಾವನೆಗಳ ತಾಕಲಾಟಗಳನ್ನು ಪ್ರತಿಬಿಂಬಿಸಿದ್ದಾರೆ.

ಸರಿತಾ ನವಲಿಯವರ ಶೈಲಿ ಸರಳವಾಗಿದ್ದು, ಕತೆಗಳು ಸುಲಭವಾಗಿ ಓದಿಸಿ ಕೊಂಡು ಹೋಗುತ್ತವೆ. ತಮ್ಮ ಅನುಭವಲೋಕದ ವಿಸ್ತಾರದೊಂದಿಗೆ ಕತೆಗಳಲ್ಲಿ ಮಹಿಳಾ ಸಂವೇದನೆಯನ್ನು ಕಟ್ಟಿಕೊಟ್ಟ ಬಗೆ ವಿಶಿಷ್ಟ ಹಾಗೂ ಅನನ್ಯ.

- ಡಾ.ವಸುಂಧರ ಭೂಪತಿ

Preview download free pdf of this Kannada book is available at Avanavanu Kayva