• Gruha Vastu Manjari
  • Ebook Hide Help
    ₹ 90
    100
    10% discount
    • fb
    • Share on Google+
    • Pin it!
  • ಗೃಹ ವಾಸ್ತು ಮಂಜರೀ

    Gruha Vastu Manjari

    Pages: 136
    Language: Kannada
    Rating
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    Be the first to vote
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    '0/5' From 0 premium votes.
Description

ಸನಾತನ ಜೀವನ ಪದ್ಧತಿಯಲ್ಲಿ ಮನುಷ್ಯನು ತನ್ನ ಜೀವನ ಪದ್ಧತಿಯನ್ನು ಸಾರ್ಥಕಗೊಳಿಸಲು ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಅಳವಡಿಸಬೇಕು. ಈ ಪುರುಷಾರ್ಥಗಳ ಮಾರ್ಗವನ್ನು ತಿಳಿಸಲು ಮುಖ್ಯ ಪಾತ್ರವನ್ನು ಹೊಂದಿರುವ ಗುಪ್ತ ನಿಧಿಯು 'ವೇದ'ವು ಆಗಿದೆ. ವೇದವನ್ನು ಶಾಸ್ತ್ರಗಳಲ್ಲಿ “ಪರಮಾತ್ಮನ ಉಸಿರಾಟದಿಂದ ಬಂದಿರುವುದು” ಎಂಬುದಾಗಿ ಪರಿಗಣಿಸಿದ್ದಾರೆ.

ಧರ್ಮಬದ್ಧವಾದ ಮನುಷ್ಯ ಜೀವನವು ನಾಲ್ಕು ಆಶ್ರಮಗಳಿಗೆ ಒಳಪಟ್ಟಿದೆ. ಅವು, 1.ಬ್ರಹ್ಮಚರ್ಯಾಶ್ರಮ, 2. ಗೃಹಸ್ಥಾಶ್ರಮ, 3.ವಾನಪ್ರಸ್ಥಾಶ್ರಮ, 4, ಸನ್ಯಾಸಾಶ್ರಮ. ಈ ನಾಲ್ಕು ಆಶ್ರಮಗಳಲ್ಲಿ ಗೃಹಸ್ಥಾಶ್ರಮ ಬಹಳ ಮುಖ್ಯವಾದುದು. ಸಂಸ್ಕೃತ ವ್ಯಾಕರಣ ರೀತಿಯಲ್ಲಿ ಗೃಹಸ್ಥಾಶ್ರಮ ಪದವು गृहं ಎಂಬ ನಪುಂಸಕ ಲಿಂಗ ಶಬ್ದದಿಂದ गृहे तिष्ठति इति गृहस्थ: ಎಂಬುದಾಗಿ ಆಗುತ್ತದೆ. गृहा: ಎಂದು “ಪತ್ನಿ” ಎನ್ನುವ ಅರ್ಥದಲ್ಲಿರುವ ನಿತ್ಯ ಬಹುವಚನಾಂತ ಶಬ್ದದಿಂದ गृहा: सह तिष्ठति इति - गृहस्थ: ಎಂಬುದಾಗಿ ಆಗುತ್ತದೆ. ಅದರಿಂದ गृहे गृहै: सह तिष्ठति इति – “गृहस्थ:” ಎಂದಾಗಿ ವ್ಯುತ್ಪತ್ತಿಯನ್ನು ಹೇಳಬಹುದು.

ವೈದಿಕ ಕಾರ್ಯಕ್ರಮಗಳಲ್ಲಿ ಗೃಹಪ್ರವೇಶವು ಮುಖ್ಯವಾದ ಕಾರ್ಯವಾಗಿದೆ. ಈ ಕಾರ್ಯದ ಪೂರ್ವ ಅವಲೋಕನ ಮಾಡಿಸುವ ವಿಧಾನವನ್ನು ಇಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ವಿಶೇಷವಾಗಿ ವಾಸ್ತು ಮಂಡಲ ಆವಾಹನ ವಿಧಾನವನ್ನು ಕೆಲವು ಗ್ರಂಥಗಳಿಂದ ಸಂಗ್ರಹಿಸಿ ಪ್ರಕಟಿಸಲಾಗಿದೆ. ವಾಸ್ತುಪುರುಷನ ಆಗಮನ ಸಂದರ್ಭವನ್ನು ನಿರೂಪಣೆ ಮಾಡಲಾಗಿದೆ.

ಈ ಗ್ರಂಥವನ್ನು ನಮ್ಮ ಸ್ವ ಪ್ರೇರಣೆಯಿಂದ, ವೇದ ನಾರಾಯಣನ ಅನುಗ್ರಹದಿಂದ, ಮುಖ್ಯವಾಗಿ ನಮ್ಮ ಗುರುಗಳಾದ ವೇ ಬ್ರ|| ಶ್ರೀ ಡಿ.ಎಸ್. ಪ್ರಕಾಶ್ ಭಟ್ ಹಾಗೂ ವೇ || ಬ್ರ|| ಶ್ರೀ ಅಮ್ಮೆ ಅನಂತ ಕೃಷ್ಣ ಭಟ್ ಅವರ ಅನುಗ್ರಹದಿಂದ ಬರೆಯಲಾಗಿದೆ. ವೈದಿಕ ಪರಂಪರೆಯಲ್ಲಿ ಇರುವ ಎಲ್ಲಾ ವಿಪ್ರ ಬಾಂಧವರು. ಈ ಗ್ರಂಥದ ಉಪಯೋಗವನ್ನು ಪಡೆಯಬೇಕೆಂಬುದು ನಮ್ಮ ಆಶಯ.

ಈ ಕಾರ್ಯವನ್ನು ಮಾಡುವುದಕ್ಕೆ ಸಹಾಯವನ್ನು ಮಾಡಿರುವ ಎಲ್ಲರಿಗೂ ನಮನವನ್ನು ಸಲ್ಲಿಸುತ್ತೇನೆ.

- ಎಂ. ಸಂದೀಪ್ ಕುಮಾರ್

Preview download free pdf of this Kannada book is available at Gruha Vastu Manjari