• Mata Illada Manyaru
  • Ebook Hide Help
    ₹ 30 for 30 days
    ₹ 72
    80
    10% discount
    • fb
    • Share on Google+
    • Pin it!
  • ಮತ ಇಲ್ಲದ ಮಾನ್ಯರು

    Mata Illada Manyaru

    Pages: 135
    Language: Kannada
    Rating
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    Be the first to vote
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    '0/5' From 0 premium votes.
Description

'ಮಾನವರೇ ಎಲ್ಲಕ್ಕೂ ಪ್ರಮಾಣ' ಎಂದ ಮಾನವತಾವಾದಿಯ ಘೋಷಣೆಯನ್ನು ಅನುಸರಿಸುತ್ತಾ, ದೈವದತ್ತ ಯಾವ ಆರಾಧನಾ ಭಾವವೂ ಇಲ್ಲೆ, 'ಮತಕ್ಕಿಂತಾ ಮನುಷ್ಯತ್ವ ಶ್ರೇಷ್ಠ' ಎಂಬ ಸದಾಶಯದಿಂದ ಆದರ್ಶವಾಗಿ ಜೀವಿಸುತ್ತಿರುವ ಸುಪ್ರಸಿದ್ಧ ಕವಿಗಳು. ಕಲಾವಿದರು, ರಾಜಕೀಯ ಮುಖಂಡರು, ವಿಜ್ಞಾನಿಗಳು, ಶಿಕ್ಷಣವೇತ್ತರು, ಹೀಗೆ ಸಾಮಾಜಿಕ ರಂಗಗಳಲ್ಲಿ ಪ್ರತಿಷ್ಠಿತರು ಆದ ಮಾನ್ಯರು ಎಷ್ಟೋ ನಮ್ಮ ದೇಶದಲ್ಲಿದ್ದಾರೆ. ಅವರು ಕೆಲ್ಸ ಮಾಡುತ್ತಿರುವ ರಂಗಕ್ಕೆ ಅವರ 'ನಾಸ್ತಿಕತೆ' ಯಾವ ರೀತಿಯಲ್ಲೂ ಅಡ್ಡಿಯಾಗಿಲ್ಲ ಎಂಬುದನ್ನು ಅವರ ಬದುಕೇ ನಿರೂಪಿಸುತ್ತಿದೆ. ಅವರು ನೀಡುವ ಪ್ರೇರಣೆ ಎಷ್ಟೋ ಮಂದಿಗೆ ಸ್ಫೂರ್ತಿ ನೀಡುತ್ತಿದೆ. ಹಾಗಾಗಿ ಅವರನ್ನು ಸರಣಿಯಾಗಿ ಓದುಗರಿಗೆ ಪರಿಚಯ ಮಾಡುವುದಕ್ಕೋಸ್ಕರ 'ಸ್ವಚ್ಚಾಲೋಚನ' ಮಾಸಿಕ 'ಮತಂ ಲೇನಿ ಮಾನ್ಯರು' ಶೀರ್ಷಿಕೆಯನ್ನು 2015 ರಲ್ಲಿ ಆರಂಭಿಸಿತು.

ಆ ಶೀರ್ಷಿಕೆಗೆ ಓದುಗರಿಂದ ವಿಶೇಷವಾಗಿ ಪ್ರತಿಕ್ರಿಯೆಗಳು ದೊರಕಿದವು. ಅವೆಲ್ಲವನ್ನು ಮಸ್ತಕವಾಗಿ ತಂದರೆ ಚೆನ್ನಾಗಿರುತ್ತೆ ಎಂದು ಕೆಲವರು ಸೂಚಿಸಿದರು. 'ಸ್ವೇಚ್ಭಾಲೋಚನ ಪ್ರಕಟಣೆ' ಗಳನ್ನು ಯಾವ ಪುಸ್ತಕದೊಂದಿಗೆ ಆರಂಭಿಸಬೇಕೆಂದು ಆಲೋಚಿಸಿದಾಗ, ಓದುಗರ ಸೂಚನೆಯನ್ನು ಗೌರವಿಸುತ್ತಾ 'ಮತಂ ಲೇನಿ ಮಾನ್ಯಲು' ಮೊದಲಿಗೆ ಪ್ರಕಾಶಿಸುವುದು ಒಳ್ಳೆಯದೆನಿಸಿತು.

ಮಾನವ ನಾಗರೀಕತೆ ಪರಿವರ್ತನೆಯ ಪುರೋಗಾಮಿ ದಿಸೆಯಲ್ಲಿ ಪಯಣಿಸಬೇಕಾದ ಹಂತದಲ್ಲಿ, ನಮ್ಮ ಸಮಾಜದಲ್ಲಿ ಜಾತಿ, ಮತ, ಮೌಡ್ಯಗಳಂಥ ಪ್ರಗತಿ ವಿರೋಧಿ ಅಂಶಗಳು ಹೊಸ ವೇಷ ಭಾಷೆಗಳಿಂದ ಜನಸಮೂಹವನ್ನು ತಿರೋಗಮನದತ್ತ ಹೊರಳಿಸುವುದಕ್ಕೆ ಪ್ರಯತ್ನಿಸುತ್ತಿವೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ರಂಗಗಳಲ್ಲಿ ಅವರನ್ನು ನಯಾ ಗುಲಾಮರನ್ನಾಗಿ ಬದಲಿಸುವ ಧೋರಣೆಗಳು ಬಲಗೊಳ್ಳುತ್ತಿವೆ. ಇಂತಹಾ ಪರಿಸ್ಥಿತಿಗಳಲ್ಲಿ ವೈಚಾರಿಕ ಆಲೋಚನಾ ಧೋರಣೆಯನ್ನು ಬೆಳೆಸಿ, ಜನರಲ್ಲಿ ಸತ್ಯಾನ್ವೇಷಣೆಯನ್ನು, ವಿವೇಕವನ್ನು ಬೆಳೆಸುತ್ತಾ ಅವರ ಜ್ಞಾನ ಪುನರ್‌ವಿಕಾಸಕ್ಕೆ ಪೂರಕವಾಗಲೆಂಬ ಗುರಿಯೊಂದಿಗೇನೆ 'ಸ್ವೇಚ್ಛಾಲೋಚನ ಪ್ರಕಾಶನಗಳು' ನಿಮ್ಮ ಮುಂದಕ್ಕೆ ಬರುತ್ತಿದೆ. ನಮ್ಮ ಈ ಪ್ರಯತ್ನವನ್ನು ಓದುಗ ಲೋಕ ಆದರಿಸಿ ಸಹಕರಿಸುವರು ಎಂದು ನಂಬುತ್ತೇವೆ.

- ಸಂಪಾದಕ ವರ್ಗ

Preview download free pdf of this Kannada book is available at Mata Illada Manyaru