• Naksalbari
 • Ebook Hide Help
  ₹ 30 for 30 days
  ₹ 126
  140
  10% discount
  • fb
  • Share on Google+
  • Pin it!
 • ನಕ್ಸಲ್ಬರಿ

  Naksalbari

  Pages: 232
  Language: Kannada
  Rating
  0 Star Rating: Recommended
  0 Star Rating: Recommended
  0 Star Rating: Recommended
  0 Star Rating: Recommended
  0 Star Rating: Recommended
  Be the first to vote
  0 Star Rating: Recommended
  0 Star Rating: Recommended
  0 Star Rating: Recommended
  0 Star Rating: Recommended
  0 Star Rating: Recommended
  '0/5' From 0 premium votes.
Description

ನಕ್ಸಲ್ಟರಿ ವಸಂತ ಮೇಘ ಗರ್ಜನೆ ದೇಶದಾದ್ಯಂತ ಪ್ರತಿಧ್ವನಿಸಿ 50 ವರ್ಷಗಳಾಗುತ್ತಿವೆ. ಭಾರತ ದೇಶಕ್ಕೆ ಸರಿಯಾದ ಮುಕ್ತಿಮಾರ್ಗವನ್ನು ತೋರಿಸಿದ ನಕ್ಸಲ್ಟರಿ ಆಂದೋಲನ ಒಂದು ದಾವಾಲನದಂತೆ ದೇಶವನ್ನೆಲ್ಲಾ ಜ್ವಲಂತಗೊಳಿಸಿತು. ಆ ಹೋರಾಟ ಜ್ವಾಲೆಗಳು ದಂಡಕಾರಣ್ಯವನ್ನು ಉರಿಸಿದವು. ಕ್ರಾಂತಿಕಾರಿಗಳು ನೀರೊಳಗಿನ ಮೀನಿನಂತೆ ಆದಿವಾಸಿಗಳಲ್ಲಿ ಬೆರೆತುಹೋಗಿ 'ಲಾಲ್‌ಬನೋ ಗುಲಾಮಿ ಛೋಡೋ' ಜಾಗೃತಿಯಿಂದ ಜನಯುದ್ಧವನ್ನು ನಿರ್ವಹಿಸುತ್ತಾ, ಕೆಂಪು ಪ್ರತಿಭಟನಾ ನೆಲೆಗಳ ನಿರ್ಮಾಣ ಕಾರ್ಯಕ್ರಮದಲ್ಲಿ ತಲ್ಲೀನರಾಗಿದ್ದಾರೆ. ನಕ್ಸಲ್ಟರಿಗೆ ಸಾವಿಲ್ಲಾ ಎಂದು ವಾಗ್ದಾನ ಮಾಡ್ತಿದ್ದಾರೆ.

1992 ರಲ್ಲಿ ಎಐಎಸ್‌ಆರ್‌ಎಫ್ ಪ್ರಕಟನೆಯಾಗಿ, ಇಂಗ್ಲೀಷ್‌ನಲ್ಲೂ ಆನಂತರ ಮೇ 1997 ರಲ್ಲಿ ನಕ್ಸಲ್ಟರಿ ಮೂವತ್ತು ವಸಂತಗಳ ಸಂದರ್ಭದಲ್ಲಿ ಶ್ರಾಮಿಕ ವರ್ಗ ಪ್ರಕಟನೆಯಾಗಿ ತೆಲುಗಿನಲ್ಲೂ ಬಂದಿತು. ಈಗ ವಿರಸಂ ಪ್ರಕಟನೆಯಾಗಿ ಎರಡನೇ ಮುದ್ರಣ ನಿಮ್ಮ ಮುಂದಕ್ಕೆ ಬರುತ್ತಿದೆ. 1967 ರಲ್ಲಿ ಆರಂಭವಾದಾಗಿನಿಂದ 1992 ರವರೆಗೂ ನಕ್ಸಲ್ಟರಿ ಚಳವಳಿ ಚರಿತ್ರೆಯನ್ನು, ಏಳುಬೀಳುಗಳನ್ನು ವಿಮರ್ಶನಾತ್ಮಕವಾಗಿ ಈ ಪುಸ್ತಕ ಪರಿಶೀಲಿಸಿತು. ಇದು ಸ್ವಯಂ ವಿಮರ್ಶನಾ ದೃಷ್ಟಿಕೋನದಿಂದ ಆಂದೋಲನದ ಲೋಪಗಳನ್ನು ಸಹಾ ಅಂದಾಜು ಹಾಕಿದೆ. ಹಿನ್ನೆಲೆಗೆ ಸರಿದಿದ್ದ ಚಳವಳಿಯನ್ನು ಪುನರ್‌ನಿರ್ಮಿಸಿದ್ದ ವಿಧಾನವನ್ನು ವಿವರಿಸಿದೆ. ನಕ್ಸಲ್ಟರಿ ಬೆಳಕಿನಲ್ಲಿ ಹೊಸ ಪ್ರಜಾತಂತ್ರ ಕ್ರಾಂತಿಯ ಕರ್ತವ್ಯವನ್ನು ಸಂಪೂರ್ಣ ಮಾಡುವುದಕ್ಕೆ ಅನುಸರಿಸಬೇಕಾದ ತಂತ್ರಗಳಿಗೆ ಸಂಬಂಧಿಸಿದ ಅನೇಕ ಅಂಶಗಳನ್ನು ಚರ್ಚಿಸಿದೆ. 1969 ಮೇ 1 ರಂದು ಅಂತರಾಷ್ಟ್ರೀಯ ಶ್ರಾಮಿಕ ವರ್ಗ ದಿನವಾದ ಮೇ ಡೇ ದಿನದಂದು ಕಲ್ಕತ್ತಾದಲ್ಲಿ ಭಾರತ ಕಮ್ಯುನಿಸ್ಟ್ ಪಾರ್ಟಿ (ಮಾರ್ಕಿಸ್ಸು-ಲೆನಿನಿಸ್ಸು) ಜನನದಿಂದ ವಿವಿಧ ರಾಜ್ಯಗಳಲ್ಲಿ ಆ ಪಾರ್ಟಿ ನಿರ್ಮಾಣ ಪ್ರಗತಿಗಳ ಕ್ರಮವನ್ನು ವಿವರಿಸಿದೆ. ಅಷ್ಟೇ ಅಲ್ಲದೆ ಚಳವಳಿ ವಿಸ್ತಾರ ಆಗುತ್ತಿರುವ ಕ್ರಮದಲ್ಲಿ ಪಾರ್ಟಿಯಲ್ಲಿ ಏರ್ಪಟ್ಟ ಅನೇಕ ವಿಧಗಳ ಬಿರುಕುಗಳಿಗಿರುವ ಕಾರಣಗಳನ್ನು ವಿಶ್ಲೇಷಿಸಿದೆ. ಒಂದು ಕಡೆ ಬಿರುಕುಗಳ ಕಾರಣದಿಂದ ಬಲಹೀನಗೊಳ್ಳುತ್ತಿರುವಂತೆ ಕಂಡುಬರುತ್ತಲೇ, ಬದ್ಧತೆಯಿಂದ ಕೂಡಿದ ಜಾಗೃತವಾದ ಕೃಷಿಯ ಫಲವಾಗಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಮಾರ್ಕಿಸ್ಟ್-ಲೆನಿನಿಸ್ಟ್) (ಪೀಪಲ್ ವಾರ್) ಆಗಿ ಅದೇ ದೇಶವ್ಯಾಪಿ ಹೋರಾಟ ಪಾರ್ಟಿಯಾಗಿ ಬೆಳೆದ ರೀತಿಯನ್ನು ಅಕ್ಷರಬದ್ಧಗೊಳಿಸಿದೆ. ಸಶಸ್ತ್ರ ರೈತ ಚಳವಳಿಯನ್ನು ಮುಂದಕ್ಕೆ ಕೊಂಡೊಯ್ಯುವುದರಲ್ಲಿ ಭಾಗವಾಗಿ ಪ್ರಜಾಸಂಘಗಳ ನಿರ್ಮಾಣ, ಅವುಗಳ ಪಾತ್ರ ಕುರಿತು ಸಹಾ ಈ ಕೃತಿ ಅಧಿಕೃತವಾಗಿ ವಿವರಿಸಿದೆ.

1992 ರ ಬಳಿಕ ಕ್ರಾಂತಿಚಳವಳಿ ತುಂಬಾ ವಿಸ್ತರಣೆ ಪಡೆಯಿತು. ಅನೇಕ ಅಡೆತಡೆಗಳನ್ನೂ ಎದುರಿಸಿತು. ಬೇರೆ ಬೇರೆ ಕ್ರಾಂತಿ ನಿರ್ಮಾಣಗಳ ನಾಯಕತ್ವದಲ್ಲಿ ಮುಂದುವರಿಯುತ್ತಾ ಬಂದ ಪ್ರಜಾಸಶಸ್ತ್ರ ಹೋರಾಟಗಳು ಐಕ್ಯ ವಿಪ್ಲವ ಚಳವಳಿಯಾಗಿ ಸಂಘಟಿತಗೊಂಡವು. ಅನೇಕ ಕಲ್ಲೋಲಗಳಿಂದ ಅಸ್ತವ್ಯಸ್ತವಾಗಿ ಹೋಗುತ್ತಿರುವ ಭಾರತ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ವ್ಯವಸ್ಥೆಗಳಿಗೆ ಒಂದು ಪರ್ಯಾಯ ಶಕ್ತಿಯಾಗಿ ಬೆಳೆದಿದೆ. ತೀವ್ರವಾದ ವಿಮುಕ್ತ ಪ್ರಾಂತಗಳ ಏರ್ಪಾಟಿನ ದಿಕ್ಕಿನತ್ತ ಮುಂದುವರಿಯುತ್ತಿರುವುದು.

2017 ರ ಮೇ ದಿನಕ್ಕೆ ನಕ್ಸಲ್ಟರಿಗೆ 50 ವರ್ಷಗಳು. ಈ ಅವಧಿಯುದ್ದಕ್ಕೂ ಅಡೆತಡೆಗಳ ಗತಿತರ್ಕದ ನಡುವೆಯೇ ಸಾಧಿಸಿದ ವಿಜಯಗಳನ್ನು ಪ್ರಚಾರ ಮಾಡುವುದಕ್ಕೆ ಇದೊಂದು ಸಂದರ್ಭ. ಈ ಚರಿತ್ರೆಯನ್ನೆಲ್ಲಾ ಮಥಿಸಿ ಮತ್ತಷ್ಟಾಗಿ ಕ್ರಾಂತಿ ಚಳವಳಿಯನ್ನು ಮುಂದುವರಿಸಬೇಕಾದ ಸಂದರ್ಭ ಕೂಡಾ. ಭೂಸ್ವಾಮ್ಯಕ್ಕೆ, ಸಾಮ್ರಾಜ್ಯಶಾಹಿಗೆ ವಿರುದ್ಧವಾಗಿ ಭಾರತೀಯ ಪ್ರಜೆಗಳು ನಿರ್ಮಿಸುತ್ತಿರುವ ಕ್ರಾಂತಿಚಳವಳಿ ಜಾಗತಿಕ ಸೋಷಲಿಸ್ಟ್ ಚಳವಳಿಯಲ್ಲಿ ಅಂತರ್ಭಾಗ. ಅದಕ್ಕೇ 50 ವರ್ಷಗಳ ನಕ್ಸಲ್ಟರಿಯನ್ನು 50 ವಸಂತಗಳ ಮಹತ್ತರ ಶ್ರಮಜೀವಿ ವರ್ಗದ ಸಾಂಸ್ಕೃತಿಕ ಕ್ರಾಂತಿ, ಶತವಸಂತಗಳ ಬೊಲ್ಪಿವಿಕ್ ಕ್ರಾಂತಿಯ ಸ್ಫೂರ್ತಿದಾಯಕ ಕಾರ್ಯಕ್ರಮದಲ್ಲಿ ಭಾಗವಾಗಿ ಸೋಷಿಯಲಿಸಮೇ ಪರ್ಯಾಯ ಎಂಬ ಘೋಷಣೆ ತೆಲುಗಿನಲ್ಲಿ ವ್ಯಾಖ್ಯಾನಿಸಿಕೊಳ್ಳ ಬೇಕಾಗಿರುವುದು.

ಇದರಲ್ಲಿನ ಭಾಗವಾಗಿ ಈ ಪುಸ್ತಕವನ್ನು ಪುನರ್ ಮುದ್ರಿಸುತ್ತಿದ್ದೇವೆ. ನಕ್ಸಲ್ಟರಿ ಚಳವಳಿಯ ಮುಂದುವರಿಕೆಯಾಗಿ ಭಾರತೀಯ ಕ್ರಾಂತಿ ಚಳವಳಿ ಮೇಲೆ ಬಂದ ವಿಶೇಷಣ ಕೃತಿಗಳಲ್ಲಿ ಇದಕ್ಕೆ ಪ್ರಾಮುಖ್ಯತೆ ಇದೆ. ನಕ್ಸಲ್ಬರಿ ಒಂದು ಊರಲ್ಲ, ಅದೊಂದು ಕ್ರಾಂತಿಮಾರ್ಗ ಎಂಬ ರಾಜಕೀಯ, ಆರ್ಥಿಕ, ತಾತ್ವಿಕ ಸಿದ್ಧಾಂತಕ್ಕೆ ಗ್ರಹಿಕೆಗೆ ಕಟ್ಟುಬಿದ್ದ ವಿಪ್ಲವ ರಚಯತರ ಸಂಘ ತೆಲುಗು ಓದುಗರಿಗೆ ಈ ಪುಸ್ತಕವನ್ನು ತಲುಪಿಸುತ್ತಿದೆ.

- ವಿರಸಂ

Preview download free pdf of this Kannada book is available at Naksalbari