• Sandeshagalanolagonda Sanna Kathegalu
  • Ebook Hide Help
    ₹ 72
    72
    0% discount
    • fb
    • Share on Google+
    • Pin it!
  • ಸಂದೇಶಗಳನ್ನೊಳಗೊಂಡ ಸಣ್ಣ ಕಥೆಗಳು

    Sandeshagalanolagonda Sanna Kathegalu

    Pages: 48
    Language: Kannada
    Rating
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    Be the first to vote
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    0 Star Rating: Recommended
    '0/5' From 0 premium votes.
Description

ಒಂದು ಮುಸ್ಸಂಜೆ ಹೊತ್ತು, ಅಂದವಾಗಿ ಆನಂದವಾಗಿ ಸೀತಾ, ಆನಂದಬೈರವಿ ರಾಗವನ್ನು, ರವೀಂದ್ರ ಭಾರತಿ ಸ್ಟೇಡಿಯಂನಲ್ಲಿ ಆಲಾಪನೆ ಮಾಡುತ್ತಿದ್ದಳು. ಅದಕ್ಕನುಗುಣವಾಗಿ ಶ್ಯಾಮ್ ವೀಣೆಯನ್ನು ನುಡಿಸುತ್ತಿದ್ದನು.

ಈ ಸಂಗೀತ ರಸ ಸಂಜೆಯನ್ನು ಸಭಿಕರೆಲ್ಲರೂ ತನ್ಮಯತೆಯಿಂದ ಸಂಗೀತದ ರಸದೌತಣವನ್ನು ಆಲಿಸುತ್ತಿದ್ದರು. ಅಷ್ಟರಲ್ಲಿ ಆಕಸ್ಮಿಕವಾಗಿ ಸೀತೆಗೆ ಮೂರ್ಛೆ ಬಂದಿದ್ದರಿಂದ ಪ್ರ್ಞಹೀನಳಾಗಿ ಬಿದ್ದು ಹೋದಳು. ಆ ಕ್ಷಣ ಪಕ್ಕದಲ್ಲಿದ್ದ ಶ್ಯಾಮ್ ತನ್ನ ಬಾಟಲಿನಿಂದ ನೀರನ್ನು ತೆಗೆದುಕೊಂಡು ಸೀತೆಯ ಮೇಲೆ ಚಿಮುಕಿಸಿ ಸೀತೆಯ ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಅವನ ಶಲ್ಯದಿಂದ ಹಗುರವಾಗಿ ಬೀಸುತ್ತಿದ್ದನು.

ಒಂದು ಕ್ಷಣ ಈ ಘಟನೆಯಿಂದ ಸಭಿಕರೆಲ್ಲರ ಮುಖದಲ್ಲಿ ಗಾಬರಿ ಉಂಟಾಯಿತು. ಸಭೆ ಮೌನವಾಯಿತು.

ತಕ್ಷಣವೇ ಸೀತೆಯ ಪತಿ ರಾಮ ಓಡಿ ಬಂದು ಸೀತೆಯನ್ನು ಹೆಗಲಮೇಲೆ ಹಾಕಿಕೊಂಡು ತನ್ನ ಆಪ್ತಮಿತ್ರನಾದ ಶ್ಯಾಮ್‍ನ ಸಹಾಯದಿಂದ ಸೀತೆಯನ್ನು ಕಾರಿನ ಹತ್ತಿರ ಕರೆತಂದು, ಶ್ಯಾಮ್ ಡ್ರೈವ್ ಮಾಡಿದ್ದರಿಂದ ಮನೆ ತಲುಪಿದರು.

ಮಾರನೇ ದಿನ ಸೀತಳಿಗೆ ಸ್ವಲ್ಪವಾಸಿಯಾಗಿದ್ದುದರಿಂದ ಸೀತೆಯೊಡನೆ ರಾಮ್ ಮತ್ತು ಶ್ಯಾಮ್‍ರು ಪಾರ್ಕಿಗೆ ವಾಕಿಂಗ್ ಮಾಡುವುದಕ್ಕೋಸ್ಕರ ಹೊರಟರು. ಹೋಗುತ್ತಿರುವಾಗ ಕೆಲವು ಹೆಂಗಸರು ಅವರನ್ನು ಒಂದು ಥರಾ ನೋಡುತ್ತಿದ್ದರು. ಇವರ ಭಾವನೆ ಏನೆಂದು ಮೂವರಿಗೆ ಅರ್ಥವಾಗಲಿಲ್ಲ.

ವದ್ಯರು ಸೀತಾಳಿಗೆ ಸ್ವಲ್ಪ ವಿಶ್ರಾಂತಿ ಬೇಕೆಂದು ಹೇಳಿದ್ದರಿಂದ ಸೀತಾ ಹಾಡುವುದನ್ನು ನಿಲ್ಲಿಸಿದ್ದಳು. ಆದ್ದರಿಂದ ಶ್ಯಾಮ್, ಮನೆಯಲ್ಲಿದ್ದರೂ, ಆಫೀಸಿನಲ್ಲಿದ್ದರೂ ಸೀತೆಯ ಆರೋಗ್ಯದ ಬಗ್ಗೆ ತಿಳಿದುಕೊಳ್ಳುತ್ತಿದ್ದನು. ನಿಷ್ಕಲ್ಮಶವಾದ ಸ್ನೇಹ ಸಂಬಂಧ ರಾಮ್ ಮತ್ತು ಶ್ಯಾಮ್‍ನದು. ಆದ್ದರಿಂದ ಶ್ಯಾಮ್ ಎಷ್ಟೇ ಬಾರಿ ಮನೆಗೆ ಬಂದು ಹೋದರೂ ರಾಮ್‍ನ ಮನಸ್ಸಿನಲ್ಲಿ ಕೆಟ್ಟ ಭಾವನೆ ಬಂದಿರಲಿಲ್ಲ.

ಹೀಗೆ ಒಂದು ವಾರ ನಡೆಯಿತು. ಹೀಗೆ ಶ್ಯಾಮ್ ಬಂದು ಹೋಗುತ್ತಿದ್ದುದರಿಂದ ಸಮಾಜದ ದೃಷ್ಟಿ ಸೀತಾಳ ಮತ್ತು ಶ್ಯಾಮ್‍ನ ಮೇಲೆ ಬಿತ್ತು. ಅಕ್ಕಪಕ್ಕದ ಜನರ ಬಾಯಲ್ಲಿ ಗುಸುಗುಸು ಶುರುವಾಯಿತು.

ಒಂದು ದಿನ ಸೀತಾ ಮತ್ತು ರಾಮ್ ಚಲನ ಚಿತ್ರ ನೋಡಲು ಹೊರಟರು. ವಿರಾಮದ ಸಮಯದಲ್ಲಿ ಆಕಸ್ಮಿಕವಾಗಿ ಅವರಿಗೆ ಅಡಚಣೆಯಾಯಿತು. ಎಲ್ಲರೂ ಸೀತೆ ಸಭೆಯಲ್ಲಿ ಬಿದ್ದು ಹೋಗಿದ್ದ ಸಮಯದಲ್ಲಿ ಶ್ಯಾಮ್ ಮಾನವೀಯತೆಯಿಂದ ಸೀತೆಯನ್ನು ಉಪಚರಿಸಿದ ರೀತಿಯನ್ನು ವ್ಯಂಗ್ಯವಾಗಿ ಮಾತನಾಡಿಕೊಂಡರು. ಚಲನಚಿತ್ರದ ಅರ್ಧದಲ್ಲಿಯೇ "ಆ ಮಾತುಗಳನ್ನು ಕೇಳಿಸಿ ಕೊಳ್ಳಲಾರದೆ ಗಂಡ-ಹೆಂಡತಿ ಇಬ್ಬರೂ ಮನೆಗೆ ವಾಪಸ್ ಹೋದರು.

ಸೀತಾಳಿಗೆ ಆಯಾಸವಾಗಿದ್ದರಿಂದ ನಿದ್ದೆಮಾಡಿದಳು. ಆದರೆ ರಾಮನಿಗೆ ನಿದ್ದೆ ಬರಲಿಲ್ಲ. ಹೊರಗಡೆ ವರಾಂಡದಲ್ಲಿ ಅತ್ತ, ಇತ್ತ ಓಡಾಡುತ್ತ ಸಭೆಯಲ್ಲಿ ಸೀತಾ ಬಿದ್ದಿದ್ದು, ಶ್ಯಾಮ್ ಮಾನವೀಯತೆಯಿಂದ ಉಪಚರಿಸಿದ್ದು, ಪಾರ್ಕಿನಲ್ಲಿ, ಸಿನಿಮಾದಲ್ಲಿ ಎಲ್ಲರ ಮಾತುಗಳನ್ನೂ ಲೆಕ್ಕ ಹಾಕುತ್ತಾ ಆಲೋಚನೆ ಮಾಡುತ್ತಾ ಇದ್ದನು. ಅವನ ತಲೆಯಲ್ಲಿ ಅನುಮಾನ ಶುರುವಾಯಿತು.

Preview download free pdf of this Kannada book is available at Sandeshagalanolagonda Sanna Kathegalu