-
-
ಆಕಾಶ ಧಾನ್ಯ ಭಾಗ - 1
Akasa Dhanya Bhaga 1
Author: K.V. Chandra Jyothi
Publisher: Self Published on Kinige
Pages: 166Language: Kannada
‘ಆಕಾಶ ಧಾನ್ಯ’ ಎಂದರೆ ಮನಸ್ಸುಗಳಿಗೆ ಶ್ರೇಷ್ಠ ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಿಂತನೆಗಳ ಉಣಿಸು ಎಂದು ಅರ್ಧಯಿಸಬಹುದು. ರೆವರೆಂಡ್ ಡಾ.ಟಿ.ಎ.ಪ್ರಭುಕಿರಣ್ ರವರ ತೆಲುಗು ಮೂಲದ ಉಪನ್ಯಾಸಗಳ ಕನ್ನಡಾನುವಾದ ಈ ಕೃತಿ. ಆಧಾತ್ಮಕ್ಕೆ ಜಾತಿಮತಗಳ ಸಂಕೋಲೆಗಳಿಲ್ಲ. ಲಕ್ಷಕೋಟಿಗಳನ್ನು ಖರ್ಚುಮಾಡಬೇಕಾಗಿಲ್ಲ. ಮಡಿಮೈಲಿಗೆಗಳ ಹಂಗಿಲ್ಲ. ವಿಶಾಸದಿಂದ ಒಳ್ಳಿಯ ನಡತೆ, ಪರೋಪಕಾರ, ನಿಶ್ಚಲಭಕ್ತಿಗಳಿಂದ ತುಂಬಿದ ಪ್ರಾರ್ಥನೆಗಳ ಹೊರತಾಗಿ ದೇವರು ಬೇರೆನನ್ನೂ ಬಯಸುವುದಿಲ್ಲ ಎಂಬುದನ್ನು ಈ ಬರಹಗಳು ಧ್ವನಿಸುತ್ತವೆ. ಸರಳಶುದ್ಧ ಜೀವನಶೈಲಿ ನಮಗೆ ಗುರಿಮುಟ್ಟಲು ಬೇಕಾದ ಶ್ರಮಕ್ಕೆ ಶಕ್ತಿಯನ್ನು ಕೂಡಿಸಿಕೊಡುತ್ತದೆ.
ಪ್ರಭುಕಿರಣ್ ರವರ ಉಪನ್ಯಾಸಗಳು ಬರಡಲ್ಲ, ಪ್ರತಿಯೊಂದು ಶ್ರೇಷ್ಠ ಜೀವನ ಮೌಲ್ಯವನ್ನೂ ಅವರು ಸ್ವಾರಸ್ಯಕರವಾದ, ಹೃದಯಸ್ಪರ್ಶಿ ಪ್ರಸಂಗಗಳೊಂದಿಗೆ ಷೋಣಿಸಿದ್ದಾರೆ. ಉದಾ: ಪುಟ್ಟ ಹುಡುಗನೊಬ್ಬ ತಾನೂ ಸಾಹಸಿಯಾಗಬೇಕೆಂದು ಇಡೀ ರಾತ್ರಿ ಒ೦ಟಿಯಾಗಿ ಕಳೆಯಬಯಸಿದಾಗ ತಂದೆ ಹಾಗೆ ಮಾಡು, ಆದರೆ ರಾತ್ರಿ ಪೂರಾ ಕಣ್ಣು ಬಿಡದೆ ಪ್ರಾರ್ಥಿಸುತ್ತಾ ಕಾಡಿನಲ್ಲಿ ಚಿತ್ರವಿಚಿತ್ರ ಧ್ವನಿಗಳು ಕೇಳಿಸಿದರೂ ಕಣ್ಣೆರೆಯದೇ ಪ್ರಾರ್ಥನೆಯಲ್ಲಿ ತೊಡಗಿರು ಎಂದನು. ಬೆಳಿಗ್ಗೆ ನೋಡಿದರೆ ತುಸುದೂರದಲ್ಲಿ ತಂದೆ ಕೋವಿ ಹಿಡಿದು ಕಾವಲಾಗಿ ಕುಳಿತಿದ್ದಾರೆ. ಹಾಗೆಯೇ ದೇವರು ಕಷ್ಟದಲ್ಲಿರುವವರಿಗೆ ಯಾವ ರೂಪದಲ್ಲಾದರೂ ಕಾವಲಾಗಿ ಇರುತ್ತಾನೆಂಬುದು ಇಲ್ಲಿನಭಾವ.
ದೂರದೇಶದಲ್ಲಿದ್ದ ಮಗ ತಾಯಿಗೆ ಅಪರೂಪದ ಹಕ್ಕಿಯೊಂದನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟ. ಕೆಲದಿನಗಳ ಬಳಿಕ ತಾಯನ್ನು ಅಮ್ಮಾ, ನಾನೊಂದು ಸುಂದರವಾದ, ನಾನಾಭಾಷೆಗಳಲ್ಲಿ ಮಾತನಾಡಿ ನಿನ್ನನ್ನು ರಂಜಿಸುವ ಪಕ್ಷಿಯನ್ನು ಕಳುಹಿಸಿದೆನಷ್ಟೆ. ನಿನಗೆ ಇಷ್ಟವಾಯ್ತಾ? ಎಂದು ಕೇಳಿದರೆ ಆಕೆ ಇಷ್ಟವಾಗೈ ಏನಪ್ಪ ಅವತ್ತೇ ಅದನ್ನು ಸಾರುಮಾಡಿ ತಿಂದೆ. ತುಂಬಾ ರುಚಿಯಾಗಿತ್ತು. ಎಂದಳಂತೆ. ಮಾನವೀಯ ಮೌಲ್ಯಗಳ ಬೆಲೆಗೊತ್ತಿಲ್ಲದವರು ಅದನ್ನು ಕೊಂದು ತಿನ್ನಬಲ್ಲರೇ ಹೊರತು ಅದರಿಂದ ನೆಮ್ಮದಿ ಪಡೆಯಲಾರರು... ದೇವರು ನಮಗೆ ಕೊಟ್ಟಿರುವ ಶ್ರೇಷ್ಠ ಬದುಕನ್ನುನಾವು ಈ ರಾತ್ರಿ ಕೊನೆಗಾಣಿಸಿಕೊಳ್ಳುತ್ತೇವೆ.
ಶ್ರೀ ಪ್ರಭುಕಿರಣ್ ರವರು ಮಾನವ ಧರ್ಮದಲ್ಲಿ ಮಾತ್ರವೇ ನಂಬಿಕೆ ಇಟ್ಟವರು. ಬಲಾತ್ಕಾರದ ದುತಾ೦ತರಗಳ ವಿರೋಧಿ, ಅವರು ತಮ್ಮ ಉಪನ್ಯಾಸಗಳಲ್ಲಿ ಪ್ರಸ್ತುತಪಡಿಸಿರುವ ವಿಚಾರಗಳು ನಮ್ಮನ್ನು ಉನ್ನತ ಜೀವನದತ್ತ ಕೊಂಡೊಯ್ಯುತ್ತವೆ. ಮತ್ತು ಸಹಜೀವಿಗಳತ್ತ ಕರುಣೆ, ಪ್ರೀತಿಗಳನ್ನು ಉಂಟಾಗಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಈ ಉಪನ್ಯಾಸಗಳನ್ನು ಅನುವಾದಿಸಲು ಅನುಮತಿ ನೀಡಿತ ಆಧ್ಯಾತ್ಮಿಕ ಚಿಂತಕರಿಗೆ ತಲೆಬಾಗಿ ವಂದಿಸುತ್ತಾ, ಪ್ರಕಾಶಕರಿಗೆ, ಮುದ್ರಕರಿಗೆ, ಕಲಾವಿದರಿಗೆ ಸಮಸ್ತ ವಿಶ್ವಾಸಿಗಳಿಗೂ ಪ್ರಭುವಿನ ಕೃಪೆ ಸದಾ ಇರಲೆಂದು ಹಾರೈಸುವೆ. ಆಮೆನ್.
- ಅನುವಾದಕಿ
